ದಾರಿ ಹತ್ತುತ್ತಿದ್ದಂತೆ ಬಲುಕಠಿಣವಾಗುತ್ತಿದ್ದವು.
ನೇರ ನಿಂತ
ಕಲ್ಲುಬಂಡೆಗಳು ಪಾತಾಳಕ್ಕೆ ನೂಕಿಬಿಡುವ ಭಯವನ್ನ ಹುಟ್ಟುಹಾಕಿಸುವಂತಿತ್ತು.
ಅತಿ ಪ್ರಾಯಾಸಕರ
ಮಾರ್ಗದಲ್ಲಿ ಅವನು ಮೇಲಕ್ಕೆ ಸಾಗುತಿದ್ದ. ಬೆವರು ಒಂದೇಸವನೆ ಸುರಿಯುತಿತ್ತು. ಶ್ರಮದ ಉಸಿರು ನಿಧಾನವಾಗಿ
ಹೊರಚಿಮ್ಮುತಿತ್ತು. ಕೆಲವೊಮ್ಮೆ ಹಲ್ಲು ತಾನೂ ಕಚ್ಚಿಕೊಂಡು ಕೈ-ಕಾಲುಗಳು ಹಿಡಿತ ತಪ್ಪದಂತೆ ನೋಡಿಕೊಳ್ಳುತಿತ್ತು. ಬಿಗಿದ
ಮಾಂಸಖಂಡಗಳು ಗಮ್ಯಸೇರಲು ತಾವೂ ಎಷ್ಟು ಉತ್ಸಾಹಪೂರ್ಣವಾಗಿದ್ದೇವೆ ಎನ್ನುವುದನ್ನ ಸಾರಿ-ಸಾರಿ ತಿಳಿಸುವಂತಿತ್ತು.
ಕಣ್ಣುಗಳೆರಡು ಜಾಗ್ರತವಾಗಿದ್ದವು. ತಾನಿರಿಸುವ ಹೆಜ್ಜೆಗಳನ್ನ ತೂಗಿ-ತೂಗಿ ಇರಿಸುವಂತೆ
ಮಾಡುತ್ತಿದ್ದವು. ಸಹಚರರ ಯೋಗಕ್ಷೇಮಗಳನ್ನ ನೋಡಿಕೊಳ್ಳುತ್ತಾ, ಗುರಿ ಇನ್ನು
ಹೆಚ್ಚುದೂರವಿಲ್ಲವೆನ್ನುತ್ತಾ, ಸೇರಿದರೆ ಸಿಗುವ ಗೆಲುವಿನ ಸಿಹಿಯನ್ನ
ತನ್ನಲ್ಲೇ ತುಂಬಿಸಿಕೊಳ್ಳುತ್ತಾ, ಮನ ಸೋಲದಂತೆ ಹುರಿದುಂಭಿಸುವ ಕಾರ್ಯಗಳನ್ನೂ ಚಾಚೂತಪ್ಪದೇ ನಿರ್ವಹಿಸುತಿತ್ತು.
ಇರುವದೊಂದು ಹಗ್ಗವೂ, ತನ್ನ ತಾ ನಿರ್ವಂಚನೆಯಿಂದ ಸಮರ್ಪಿಸಿಕೊಂಡಿತ್ತು.
ಗಾಳಿಯೂ
ತಾನೂ ನಿನ್ನಜೊತೆಗಿರುವೆನೆನ್ನುತ್ತಾ, ಜೋರಾಗಿ ಬೀಸದೇ ಮಂದತೆಯಿಂದ ಅವನ
ಆಯಾಸವನ್ನ ಆಗಾಗ ದೂರ ಮಾಡುತಿತ್ತು.
ಅಂಗುಲದಷ್ಟು ಪ್ರಮಾಣದ ಜಾಗದಲ್ಲಿ ಹೇಗೋ
ನಿವಾಳಿಸಿಕೊಳ್ಳುತ್ತಾ ನಿಂತ ಅವನು.
ತಟ್ಟನೆ ಕೆಳಗಡೆ ಏನೋ ಸದ್ದಾಗಿ ಮುಖವನ್ನ ತಿರುಗಿಸಿ ಕೆಳ
ನೋಡಿದ.
ನೋಡಿದರೆ, ಮುಗ್ಧತೆಯೇ ತಾನೊಂದು ಆಕಾರವಾಗಿ ಹತ್ತುತ್ತಿರುವ ಅವನನ್ನೇ ತದೇಕ ಚಿತ್ತದಿಂದ
ನೋಡುತ್ತಿರುವಂತೆ ಒಬ್ಬ ವ್ಯಕ್ತಿ ನಿಂತಿದ್ದ. ಅವನ ಕಣ್ಣುಗಳು ಅರಿಯದ
ಏನೋ ಒಂದು ’ಭಾವ’ವನ್ನ ಸೂಸುತ್ತಿರುವಂತಿತ್ತು!
ಹತ್ತುತ್ತಿರುವ
ಅವನಿಗೆ ಏನನ್ನಿಸಿತೋ, ತನ್ನ ಹಗ್ಗವನ್ನ, ಮೇಲಿನಿಂದೆಳೆದು, ತನಗೆ ಬಿಗಿದು, ಅವನಿಗೂ
ಹತ್ತಿಬರಲನುಗುಣವಾಗುವಂತೆ ಕೆಳಗೆಸೆದ.
ಕೆಳಗಿರುವ
ವ್ಯಕ್ತಿಯ ಕೈ ಸೇರಿತೊಂದು ತುದಿ. ತಾನು
ಅಲ್ಲಿರುವ ಕಲ್ಲನ್ನೇ ಬಾಚಿ- ತಬ್ಬಿಕೊಂಡು ಅವನ ಭಾರವನ್ನ ಎಳೆಯುವ
ದೆಸೆಯಿಂದನಿಂತ.
ಹಾಗೇ ನಿಂತಿದ್ದ....
ನಿಂತುಕೊಂಡೇ
ಇದ್ದ.
ಸದ್ದಿಲ್ಲ.
ಭಾರವಿಲ್ಲ!
ತಿರುಗಿ; ಕೆಳನೋಡಿದ.
ಕೆಳನಿಂತವನ ವಾಸನೆಯೇ ಇಲ್ಲಾ!
ಮರವೊಂದೇ ನಿಂತಿತ್ತು- ಬಿಗಿಯಲ್ಪಟ್ಟ ಹಗ್ಗದತುದಿಯನ್ನ ಹೊಂದಲ್ಪಟ್ಟು; ಮನುಜನ ಅಸೂಯೆಗೆ ಸಾಕ್ಷಿಯಾಗಿ!!
ಕೆಳನಿಂತವನ ವಾಸನೆಯೇ ಇಲ್ಲಾ!
ಮರವೊಂದೇ ನಿಂತಿತ್ತು- ಬಿಗಿಯಲ್ಪಟ್ಟ ಹಗ್ಗದತುದಿಯನ್ನ ಹೊಂದಲ್ಪಟ್ಟು; ಮನುಜನ ಅಸೂಯೆಗೆ ಸಾಕ್ಷಿಯಾಗಿ!!
ಕುಣಿಕೆ ! ಇನ್ನೂ ಸರಿಯಾಗುವ ಹೆಸರು !!ಚಂದ ಬರಹ :)
ಪ್ರತ್ಯುತ್ತರಅಳಿಸಿ:) :)chenagiddu...
ಪ್ರತ್ಯುತ್ತರಅಳಿಸಿಹಿಡಿದ ದಾರಿ ಮುಗಿವವರೆಗೆ ಹಿಂದೆ ನೋಡದಿದ್ದರೆ ಒಳಿತೇನೋ...!
ಪ್ರತ್ಯುತ್ತರಅಳಿಸಿಬರಹ ..
ಪ್ರತ್ಯುತ್ತರಅಳಿಸಿಹೊಸ ಪ್ರಯೋಗ ಶೈಲಿ ಇಷ್ಟವಾಯಿತು.......
ಗಟ್ಟಿಯಾದ ಕಥಾವಸ್ತು...
Cholo iddu
ಪ್ರತ್ಯುತ್ತರಅಳಿಸಿ