ಗುರುವಾರ, ಸೆಪ್ಟೆಂಬರ್ 15, 2011

ಕಣ್ಣೀರಿಡುತಿಹೆನು.... ಗೆಳತಿ....








ನಾನಿಲ್ಲಿಹೆನು ಗೆಳತಿ....
ನೀನ್ನಾ ನಗುಮುಖವ ನೋಡುತ್ತಾ..!
ನಾ ಕಣ್ಣೀರಿಡುತಿಹೆನು..
ನೀ ಬರೇ ನಗುಮುಖದ ಗೊಂಬೆಯಾಗಿಹೆಯೆಂದು!

ಕುಳಿತಲ್ಲಿಂದ ಅಲ್ಲಾಡುತ್ತಿಲ್ಲ ನಾ... ಗೆಳತಿ..
ಚಿತ್ತ-ಚಿತ್ರ ಪಟದಿಂದ ಅಳಿಸಿಹೋಗುವೆಯೆಂಬ ಭಯದಿಂದ!
ನಾ ಕಣ್ಣೀರಿಡುತಿಹೆನು...
ನೀ ಯಾವಾಗಲೂ... ನಗುತಿರಲೆಂದು!!

ನಾ ಅರಿತಿಹೆನು.... ಗೆಳತಿ...
ನಿನ್ನಾ ನಗುಮುಖದ ಹಿಂದಿನಾ ಮರ್ಮ ವನ್ನಾ...
ನಾ...ಕೇವಲಾ ಬೊಂಬೆಯಾಗಿಹೆನೆಂಬ ನೋವನ್ನಾ...!
ನಾ ಕಣ್ಣೀರಿಡುತಿಹೆನು...
ಮುನ್ನಾಂದಿನ.. ಆ ನೀರನ್ನೇ... ಸ್ವಾತಿಯ ಮುತ್ತನ್ನಾಗಿಸಿ...ಹಾರವಾಧರಿಸಿ
ಮತ್ತೂ ನಗಿಸುವ ಮಹದಾಸೆಯಿಂದ.......... :’( :’( :’( 



                                                                -ಪ್ರೀತಿಯ.... ಗಣೇಶಣ್ಣನಿಗರ್ಪಿತ......!!!!!

1 ಕಾಮೆಂಟ್‌:

  1. ಕಣ್ಣೀರು ತುಂಬಿದ ಕಣ್ಣಿನಲಿ ಕಾಣದು ನಿನ್ನ ಗೆಳತಿಯ ನಗುಮುಖ ಸ್ಪಸ್ಟವಾಗಿ..
    ಒರೆಸಿ ನೋಡು ಒಮ್ಮೆ ಅವಳು ನಿಜವಾಗಿ ನಗುತಿಹಳೆ ಎಂಬುದಾಗಿ...
    ಕಣ್ಣಂಚಿನಾ ಬಿಂದುಗಳು ಸೇರಿದಾಗ ಆಗುವುದು ಸ್ವಾತಿಯಾ ಮುತ್ತಾಗಿ..
    ಎಲ್ಲವನೂ ಹೇಳಿಬಿಡು ಒಮ್ಮೆ ಅಂತರಂಗದ ಸಾಕ್ಶಿಯಾಗಿ....!

    ಸಹಜವಾಗಿ ನೈಜವಾಗಿ ಮೂಡಿಬಂದಿದೆ ನಿನ್ನ ಕವನ...

    ಪ್ರತ್ಯುತ್ತರಅಳಿಸಿ