ಗುರುವಾರ, ಜುಲೈ 20, 2017

ಪುಟ್ಟ ಕಥೆ: 'ಶವ''ಸತ್ತವಳೇ.. ಎಲ್ಲಿ ಹಾಳಾಗಿ ಹೋಗಿದೀಯಾ?'

ಗಂಡನ ಕೂಗಿಗೆ ಓಡಿಹೋಗಿ ನಿಂತಳು ಅವಳು ಆತನ ಎದುರಿಗೆ.

ಅವಳನ್ನೇ ದುರುದುರು ನೋಡುತ, 'ಏನೇ ಹೆಣದಹಾಗೆ ನಿಂತ್ಯಲ್ಲ, ಈ ಕಾಲೊತ್ತು..' ಎನುತ ಅವಳೆಡೆಗೆ ಕಾಲು ಚಾಚಿ ಮಲಗಿದ ಆತ.

ಅವ ಹೇಳಿದೊಷ್ಟು ಹೊತ್ತೂ ಕಾಲೊತ್ತಿ ಬಂದಳು..

ನನ್ನ ಬಳಿ ಬಂದವಳೇ..

'ಮಗಾ.. ಸರಿಯಾಗಿ ಊಟಮಾಡೋ..' ಎಂದು ತುತ್ತ ಕಲಸಿ ನನ್ನ ಬಾಯೊಳಗಿಟ್ಟಾಗ..

 ಆ ಶವದ ಕಾರುಣ್ಯವ ಕಾಣುತ..

ನನ್ನ ಹೃದಯದಲಿ ಕುಳಿತ ದೇವರು, ಈ ಪುಟ್ಟ ಕಣ್ಣುಗಳ ತೇವವಾಗಿಸಿದ.
~
ಚಿತ್ರ: ಗೂಗಲ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ